students

ವಿವಿಧ ಸಂಘಟನೆಗಳಿಂದ ಅಂಧ ಮಕ್ಕಳಿಗೆ ಆರ್ಥಿಕ ಸಹಾಯ

Webdesk | Monday, December 11, 2017 9:33 PM IST

ವಿಜಯಪುರ ಡಿ,11:  ಕರ್ನಾಟಕ ನಾಡ ರಕ್ಷಣಾ ವೇದಿಕೆ ವತಿಯಿಂದ ಶ್ರೀ ಶಿವಶರಣ ಹರಳಯ್ಯ ಸಂಸ್ಥೆಯ ಅಂಧಮಕ್ಕಳ ಪ್ರಾಥಮಿಕ ವಸತಿ ಶಾಲೆ ಮತ್ತು ಸ್ವಪ್ನ ಕಿವುಡ ಮತ್ತು ಮೂಕಮಕ್ಕಳ ಶಾಲೆಗೆ ಬೇಟಿ ನೀಡಿ ಶಾಲೆಯ ಸ್ಥಿತಿಗತಿ ಮಕ್ಕಳ ಶಿಕ್ಷಣದ ಗುಣಮಟ್ಟ ವೀಕ್ಷಣೆ ಮಾಡಲಾಯಿತು. 
ಅಲ್ಲದೆ ತನು ಪೌಂಡೇಶನ ಮತ್ತು ಜ್ಞಾನಸಿದ್ಧ ಈಶ್ವರ ಟ್ಯೂಟೋರಿಯಲ್ಸ್ ಇವರು ಅಂಧ ಮಕ್ಕಳಿಗಾಗಿ ಸಂಗ್ರಹಿಸಿದ ನಿಧಿಯನ್ನು ವಿತರಿಸಿ, ನಂತರ ಮಕ್ಕಳಿಗೆ ಸಿಹಿ ಹಣ್ಣು ಹಂಪಲುಗಳನ್ನು ಹಂಚಲಾಯಿತು. 
ಮುಖ್ಯಅತಿಥಿಗಳಾಗಿ ನ್ಯೂ ನಳಂದ ಕರಿಯರ್ ಅಕಾಡೆಮಿಯ ಉಪನ್ಯಾಸಕ ನಾಗೇಶ ಹೆಗಡ್ಯಾಳ ಮಾತನಾಡಿ, ಅಂಧ ಮಕ್ಕಳ ಶ್ರಯೋಭಿವೃದ್ಧಿಗಾಗಿ ಇಡೀ ಭಾರತೀಯ ಸಮಾಜ ಗಮನ ಹರಿಸಬೇಕಾಗಿದೆ. ಅಂಧ ಮಕ್ಕಳು ಕೂಡಾ ಇತರೆ ಮಕ್ಕಳಂತೆ ಯಾವುದೇ ಕೊರತೆ ಕಾಣದಂತೆ ಜೀವಿಸಬೇಕು ಎಂದರು. 
ಕರ್ನಾಟಕ ನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ ಜತ್ತಿಯವರು ಮಾತನಾಡಿ, ಪಂಡಿತ ಪುಟ್ಟರಾಜ ಗವಾಯಿಗಳಂತಹ ನೂರಾರು ಅಂಧರು ಸಾವಿರಾರು ಜನರ ಬೆಳಕಾಗಿ ಹೋದರು. ದೇವರು ಅಂಧರಿಗೆ ಜಗತ್ತನ್ನು ನೋಡುವ ಭಾಗ್ಯ ಕೊಟ್ಟಿಲ್ಲ. ಆದರೆ ಅಂತರಾಳದ ಮನಸ್ಸಿನಿಂದ ಜಗತ್ತನ್ನು ಅರಿಯುವ ಸಾಮಥ್ರ್ಯ ನೀಡಿದ್ದಾನೆ ಎಂದು ಹೇಳಿದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ನಾಡ ರಕ್ಷಣಾ ವೇದಿಕೆ ಉತ್ತರ ಕರ್ನಾಟಕದ ಉಸ್ತುವಾರಿ ವಿಜುಗೌಡ ಕಾಳಶೆಟ್ಟಿ ಮಾತನಾಡಿ, ಸಂಘಟನೆಯೂ ಹೀಗೆಯೇ ಸದಾ ಕ್ರೀಯಾ ಮನೋಭಾವನೆಯಿಂದ ನಾಡಿನ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಪದಾಧಿಕಾರಿಗಳಿಗೆ ಕರೆ ನೀಡಿದರು. 
ಕಾರ್ಯಕ್ರಮದಲ್ಲಿ ಅಂಧ ಬಾಲೆ ಕುಮಾರಿ ಐಶ್ವರ್ಯ ಮಣ್ಣ ಮನುಜರೋ...... ನಾವು ಮಣ್ಣ ಮನುಜರೋ... ಎಂಬ ಗಾಯನದ ಮೂಲಕ ಸರ್ವರ ಮನ ಸೆಳೆದಳು.  
ಈ ಸಂದರ್ಭದಲ್ಲಿ ವೇದಿಕೆ ಗೌರವಾಧ್ಯಕ್ಷರಾದ ಅನೀಲಕುಮಾರ ಅಂಕದ, ವೇದಿಕೆಯ ಇಂಡಿ ತಾಲೂಕಾಧ್ಯಕ್ಷರಾದ ಮಲ್ಲಿಕಾರ್ಜುನ ಕಠಾವಿ, ಸಿದ್ಧಯ್ಯ ನಿಡಗುಂದಿ ಮಠ, ಚಿದಾನಂದ ಹೂಗಾರ, ಶಿವಾನಂದ ಇಜೇರಿ, ಪ್ರಕಾಶ ಹಳಕಟ್ಟಿ, ಬಸವರಾಜ ನಾಯಕ, ಭರತ್ ಪಾಟೀಲ, ಗುರು ಕಟ್ಟಿ, ರಾಘವೇಂದ್ರ ಮುಂತಾದವರು ಇದ್ದರು. 
ಮಹಾಂತೇಶ ಕುಂಬಾರ ನಿರೂಪಿಸಿ ವಂದಿಸಿದರು.