higher-education

ವಿದೇಶಿ ವ್ಯಾಸಂಗ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಆಹ್ವಾನ

webdesk | Friday, July 7, 2017 6:02 PM IST

ವಿಜಯಪುರ,ಜು.7: ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆಯಿಂದ ನೀಡಲಾಗುವಡಿ.ದೇವರಾಜಅರಸು ವಿದೇಶಿ ವ್ಯಾಸಂಗ ವೇತನಕ್ಕೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಆಹ್ವಾನಿಸಲಾಗಿದೆ.

ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರಸಕ್ತ 2017-18ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ-ಪಿಎಚ್‍ಡಿ-ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದಅರ್ಹ ವಿದ್ಯಾರ್ಥಿಗಳು ದಿನಾಂಕ : 15-07-2017ರೊಳಗಾಗಿ ಇಲಾಖೆಯತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ದಿಂದಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿದೂ: 080-65970004 ಸಂಖ್ಯೆಗೆ ಸಂಪರ್ಕಿಸಲುಕೋರಿದೆ.
---------------------------------------

ಪ್ರೋತ್ಸಾಹಧನ ಪಡೆಯಲು ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಂದ ಅರ್ಜಿಕರೆ
ವಿಜಯಪುರ,ಜು.7: ಸಮಾಜಕಲ್ಯಾಣ ಇಲಾಖೆ ವತಿಯಿಂದ 2017ರಲ್ಲಿ ದ್ವೀತಿಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇಂಜಿನೀಯರಿಂಗ್, ವೈದ್ಯಕೀಯ ಕೃಷಿ ಪದವಿಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರಿಗಾಗಿಆನ್‍ಲೈನ್ ಮೂಲಕ ಅರ್ಜಿಆಹ್ವಾನಿಸಲಾಗಿದೆ.
ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು, ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.ಆನ್‍ನಲೈನ್‍ಲ್ಲಿ ಹಾಕಿರುವ ಅರ್ಜಿಗಳಿಗೆ ಪ್ರಾಚಾರ್ಯರರುಜು ಮಾಡಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಸಮಾಜಕಲ್ಯಾಣ ಇಲಾಖೆ, ವಿಜಯಪುರಕಚೇರಿಗೆ ಸಲ್ಲಿಸಬೇಕು.
ಪಿಯುಸಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕ : 31-07-2017 ಹಾಗೂ ಪದವಿ, ಸ್ನಾತಕೋತ್ತರ ಪದವಿ, ಇಂಜಿನೀಯರಿಂಗ್, ವೈದ್ಯಕೀಯ ಕೃಷಿ ಪದವಿಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕ : 30-09-2017 ಕೊನೆಯ ದಿನಾಂಕವಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿಕಚೇರಿದೂ: 08352-276585 ಸಂಪರ್ಕಿಸಬಹುದಾಗಿದೆ.