teaching

ಬಿ.ಇಡಿ ಪದವಿಗೆ ಶಿಷ್ಯ ವೇತನ

webdesk | Friday, December 30, 2016 8:13 PM IST

ಬೆಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ  ಬಿ.ಇಡಿ ಪದವಿ ಪಡೆಯಲು 4 ವರ್ಷದ ಅವಧಿಯ ಶಿಷ್ಯ ವೇತನ ನೀಡಲು ಸರ್ಕಾರ ನಿರ್ಧರಿಸಿದೆ.

2013ರಲ್ಲಿ ನೇಮಕವಾದ 1,763 ಉಪನ್ಯಾಸಕರ ಪೈಕಿ 733 ಉಪನ್ಯಾಸಕರು ಬಿ.ಇಡಿ ಪದವಿ ಪಡೆದಿಲ್ಲ.  ನೇಮಕಾತಿ ಸಂದರ್ಭದಲ್ಲಿ 4 ವರ್ಷದೊಳಗೆ ಬಿ.ಇಡಿ ಪದವಿ ಪೂರ್ಣಗೊಳಿಸಬೇಕು ಎಂದು ಷರತ್ತು ವಿಧಿಸಲಾಗಿತ್ತು. ಇವರಿಗೆ ಮಾತ್ರ ಶಿಷ್ಯವೇತನ ಸಿಗಲಿದೆ.

‘ಪ್ರೊಬೇಷನರಿ ಅವಧಿಯಲ್ಲಿ ವೇತನ ಸಹಿತ ರಜೆಗೆ ಅವಕಾಶ ಇಲ್ಲ. ಬಿ.ಇಡಿ ಕೋರ್ಸ್‌ಗೆ ಪ್ರವೇಶ ಪಡೆದು ಪದವಿ ಪೂರ್ಣಗೊಳಿಸುವ ಅವಧಿಯನ್ನು ಡೈಸ್‌ನಾನ್ ಮತ್ತು ವೇತನ ರಹಿತ ಎಂದು ಪರಿಗಣಿಸಲಾಗುವುದು. ಈ ಅವಧಿಯಲ್ಲಿ ಸೂಕ್ತ ಶಿಷ್ಯ ವೇತನ ಮಂಜೂರು ಮಾಡುವಂತೆ ಮತ್ತು 4 ವರ್ಷಗಳ ನಂತರ ಉಪನ್ಯಾಸಕ ಸೇವೆ ಮುಂದುವರಿಸಲು ಅನುಕೂಲ ಕಲ್ಪಿಸುವಂತೆ ಮುಚ್ಚಳಿಕೆ ಬರೆದುಕೊಡಬೇಕು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.

ಅಲ್ಲದೆ, 2017ರ ಜ.15ರೊಳಗೆ ಬಿ.ಇಡಿ ಕೋರ್ಸ್‌ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ ವಿವರಗಳನ್ನೂ ಸಲ್ಲಿಸಲು ಸೂಚಿಸಿದ್ದಾರೆ.

ಪೂರ್ಣ ವೇತನ ನೀಡಿ:  ಶಿಷ್ಯ ವೇತನ  ಬದಲು ಪೂರ್ಣ ವೇತನ ನೀಡಬೇಕು ಎಂದು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಆಗ್ರಹಿಸಿದ್ದಾರೆ.