teaching

ರಾಜ್ಯದ 871 ಕೇಂದ್ರಗಳಲ್ಲಿ ನಡೆಯಲಿದೆ ಟಿ ಇ ಟಿ ಪರೀಕ್ಷೆ

webdesk | Thursday, January 5, 2017 9:29 AM IST

ಬೆಂಗಳೂರು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAETET 2016) ಇದೇ 15ರಂದು ರಾಜ್ಯದ 871 ಕೇಂದ್ರಗಳಲ್ಲಿ ನಡೆಯಲಿದೆ.  ಪತ್ರಿಕೆ–1 ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಪತ್ರಿಕೆ–2 ಮಧ್ಯಾಹ್ನ 2 ರಿಂದ 4.30ರವರೆಗೆ ನಡೆಯುತ್ತದೆ.  ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಇಲಾಖಾ ವೆಬ್‌ಸೈಟ್‌  (www.schooleducation.kar.nic.in) ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು.   ಪ್ರವೇಶ ಪತ್ರದಲ್ಲಿ ಹೆಸರು, ನೋಂದಣಿ ಸಂಖ್ಯೆ ಹಾಗೂ ಪರೀಕ್ಷಾ ಕೇಂದ್ರದ ವಿಳಾಸ ಮುಂತಾದ ಮಾಹಿತಿ ತಪ್ಪಾಗಿ ಮುದ್ರಿತವಾಗಿದ್ದಲ್ಲಿ ನೋಂದಣಿ ಸಂಖ್ಯೆ ಹಾಗೂ ಸಮಸ್ಯೆಯನ್ನು ಇ-ಮೇಲ್ ಮೂಲಕ ([email protected])  ಕಳುಹಿಸಿ ಸರಿಪಡಿಸಿಕೊಳ್ಳಬಹುದು ಎಂದು ಪ್ರಕಟಣೆ ಹೇಳಿದರು.