students

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ 

Webdesk | Saturday, December 30, 2017 5:15 PM IST

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಹಾಯವಾಣಿ 

ಬಾಗಲಕೋಟೆ, ಡಿ.30: ಬರುವ ಮಾರ್ಚ 2018ರಲ್ಲಿ ಜರುಗಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿರುವ ಆತಂಕ, ಭಯ ಹಾಗೂ ಗೊಂದಲಗಳ ನಿವಾರಣೆಗಾಗಿ ಮತ್ತು ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಮಾಡಲು ಜನವರಿ 1 ರಿಂದ ಸಹಾಯವಾಣಿ ಪ್ರಾರಂಭಿಸಲಾಗುತ್ತಿದೆ.
    ಗಣಿತ, ವಿಜ್ಞಾನ ಮತ್ತು ಇಂಗ್ಲೀಷ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ದಿನ ರಾತ್ರಿ 8 ರಿಂದ 9 ಗಂಟೆವರೆಗೆ ವಿಷಯ ಸಂಪನ್ಮೂಲ ಶಿಕ್ಷಕರನ್ನು ಸಂಪರ್ಕಿಸಿ ಸಮಸ್ಯೆ, ಆತಂಕಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಗಣಿತ ವಿಷಯಕ್ಕೆ ಸಂಬಂದಿಸಿದಂತೆ ಪಿ.ನಾಗರಾಜ (9448646639), ಎಚ್.ಎನ್.ನಾಯನೇಗಲಿ (9035166251), ವಿಜ್ಞಾನ ವಿಷಯಕ್ಕೆ ಸಂಬಂದಿಸಿದಂತೆ ಸಂಜೀವ ನಡುವಿನಮನಿ (9902756480), ಕೆ.ಎಸ್.ದೇಸಾಯಿ (8050997277) ಹಾಗೂ ಇಂಗ್ಲೀಷ ವಿಷಯಕ್ಕೆ ಸಂಬಂಧಿಸಿದಂತೆ ಎಲ್.ಎ.ಬಡೆಖಾನವರ (8970669788), ಎಸ್.ಎ.ಹಿರೇಮಠ (7022244679) ಶಿಕ್ಷಕರನ್ನು ಸಂಪರ್ಕಿಸುವಂತೆ ಬಾಗಲಕೋಟ ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ ಜೇವರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.