kannada

ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಟಿಪ್ಸ್ 

webdesk | Saturday, January 21, 2017 6:33 PM IST

ಸ್ಮಾರ್ಟ್‌ಫೋನ್‌ನಲ್ಲಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿ ಬಳಸಿ. ಪ್ರಮುಖ ವಿಷಯಗಳನ್ನು ಬುಕ್‌ಮಾರ್ಕ್‌ ಮಾಡಿಟ್ಟುಕೊಳ್ಳಿ. * ದಿನದ 24 ಗಂಟೆಯಲ್ಲಿ ಪರೀಕ್ಷಾ ತಯಾರಿಗೆ ಕೆಲವು ಗಂಟೆಗಳನ್ನು ಮೀಸಲಿಡಿ. * ನಿಮ್ಮ ಸಾಮರ್ಥ್ಯ‌, ದೌರ್ಬಲ್ಯಗಳನ್ನು ತಿಳಿದುಕೊಳ್ಳಿ. ಲವಲವಿಕೆಯಿಂದ ಇರಿ. ಸಮರ್ಪಕ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಿ. * ಪರೀಕ್ಷೆ ಬರೆಯುವುದು ಮಾತ್ರವಲ್ಲದೆ ಸಂದರ್ಶನ ಎದುರಿಸುವ ಕೌಶಲವನ್ನೂ ಬೆಳೆಸಿಕೊಳ್ಳಿ. * ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಅಣುಕು ಪರೀಕ್ಷೆಗಳನ್ನು ಬರೆಯುತ್ತೀರಿ. * ದಿನನಿತ್ಯ ಹಲವಾರು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಈ ಮಾಹಿತಿಯನ್ನು ಪರೀಕ್ಷೆಯಲ್ಲಿ ಕೇಳಬಹುದೇ ಎಂದು ಯೋಚಿಸುತ್ತ ಪತ್ರಿಕೆಗಳನ್ನು ಓದಿರಿ. * ಓದುವಾಗ ಅತ್ಯಮೂಲ್ಯ ಅನಿಸಿದ ಅಂಶಗಳನ್ನು ನೋಟ್ಸ್‌ನಲ್ಲಿ ಬರೆದಿಟ್ಟುಕೊಳ್ಳಿ. ಮರೆತು ಹೋಗಬಹುದಾದ ಸಂಗತಿಗಳನ್ನು ಹೀಗೆ ಬರೆದಿಟ್ಟರೆ ಆಗಾಗ ಓದಿಕೊಳ್ಳಬಹುದು. ಪರೀಕ್ಷೆಗೆ ಕೆಲವು ದಿನಗಳಿರುವಾಗ ಇಂತಹ ನೋಟ್ಸ್‌ ಮೇಲೆ ಕಣ್ಣಾಡಿಸುತ್ತಿದ್ದರೆ ಸಾಕು. * ಓದಿದ ವಿಚಾರಗಳನ್ನು ಮೆಲುಕು ಹಾಕುವ ಅಭ್ಯಾಸ ಇರಲಿ. ಅಂದರೆ, ಇಸವಿಗಳು, ಫಾರ್ಮುಲಾಗಳು, ವ್ಯಾಖ್ಯಾನಗಳನ್ನು ಆಗಾಗ ನೆನಪಿಸುತ್ತ ಇರಿ. ಹಗಲುಕನಸನ್ನು ಪಕ್ಕಕ್ಕೆ ಇರಿಸಿ ಸಮಯ ಸಿಕ್ಕಾಗಲೆಲ್ಲ ಓದಿದ ವಿಚಾರಗಳನ್ನು ನೆನಪಿಸಿಕೊಳ್ಳುತ್ತ ಇರಿ. * ಬದುಕಿನಲ್ಲಿ ಶಿಸ್ತು ಇದ್ದರೆ ಗೆಲುವು ನಿಶ್ಚಿತ. ನೀವು ದಿನದಲ್ಲಿ ಎಷ್ಟು ಗಂಟೆ ಅಧ್ಯಯನ ಮಾಡಬೇಕೆಂದು ಟೈಂಟೇಬಲ್‌ ರಚಿಸಿಕೊಳ್ಳಿ.