kannada

ಆನ್ ಲೈನ್  ಮೂಲಕ ಅರ್ಜಿ  ಆಹ್ವಾನಿಸಿದ ಧಾರವಾಡದ ಕೃಷಿ ವಿವಿ

Webdesk | Friday, March 30, 2018 8:59 PM IST

ಆನ್ ಲೈನ್  ಮೂಲಕ ಅರ್ಜಿ  ಆಹ್ವಾನಿಸಿದ ಧಾರವಾಡದ ಕೃಷಿ ವಿವಿ

ಇಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆನ್ಲೈನ್ದ ಮೂಲಕ ಅರ್ಜಿ ಆಹ್ವಾನಿಸಿದೆ. ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗವು ಹಿರಿಯ ಸಂಶೋಧಕ ಮತ್ತು ಪ್ರಾಜೆಕ್ಟ್ ಸಹಾಯಕ ಹುದ್ದೆ ಖಾಲಿಯಿರುವ ಕರಣ, ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 

ಒಟ್ಟು ಕೃಷಿ ವಿಶ್ವವಿದ್ಯಾಲದಲ್ಲಿ 26 ಖಾಲಿ ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದಾಗಿದೆ. ಖಾಲಿಯಿರುವ ಹುದ್ದೆಗಳ ವಿವರ ಇಂತಿದೆ ಹಿರಿಯ ಸಂಶೋಧಕ ಹುದ್ದೆ – 02 (ಧಾರವಾಡ), ಪ್ರಾಜೆಕ್ಟ್ ಸಹಾಯಕ ಹುದ್ದೆ – 24 (ಗದಗ-12, ವಿಜಯಪುರ– 12)

ಇನ್ನು ವಿದ್ಯಾರ್ಹತೆ ಸ್ನಾತಕೋತ್ತರ ಪದವಿ, ಕಂಪೂಟರ್ ಅರಿವಿನೊಂದಿಗೆ, ಯಾವುದಾದರು ಪದವಿ ಮುಗಿಸಿರಬೇಕು.

ಸಂದರ್ಶನ ದಿನಾಂಕ ಹಾಗು ಅರ್ಜಿ ಶುಲ್ಕ ಹೆಚ್ಚಿನ ಮಾಹಿತಿಗೆ  www.uasd.edu  ಲಾಗಿನ್ ಆಗಿ, ಮಾಹಿತಿ ಪಡೆಯಿರಿ.