kannada

ನಿರ್ವಹಣೆಗೆ ಕೋರ್ಸ್‌ 

webdesk | Tuesday, January 31, 2017 3:22 PM IST

ನಿರ್ವಹಣೆಗೆ ಕೋರ್ಸ್‌ 

ಉತ್ತಮ ಉದ್ಯೋಗಾವಕಾಶ ನೀಡುವ ಕೋರ್ಸ್‌ ಎಂದರೆ ಬ್ಯಾಚುಲರ್‌ ಆಫ್‌ ಸೈನ್ಸ್‌ (ಬಿಎಸ್‌) ಇನ್‌ ಐಟಿ ಮ್ಯಾನೇಜ್ಮೆಂಟ್‌. ಮಾಹಿತಿ ತಂತ್ರಜ್ಞಾನ ಮತ್ತಿತರ ಕಂಪನಿಗಳ ಔದ್ಯಮಿಕ ಅವಶ್ಯಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕೋರ್ಸ್‌ ಇದಾಗಿದೆ.

ತಂತ್ರಜ್ಞಾನದ ಸದ್ಭಳಕೆಯ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ದಮೆಯ ಕಾರ್ಯತಂತ್ರವನ್ನು ನಿರ್ವಹಿಸುವುದು ಮಾಹಿತಿ ತಂತ್ರಜ್ಞಾನ ನಿರ್ವಹಣೆ ಡಿಗ್ರಿಯ ಪ್ರಮುಖ ಗುರಿ. ಇದು ಮ್ಯಾನೇಜ್ಮೆಂಟ್‌ ಇನ್‌ಫಾರ್ಮೇಶನ್‌ ಸಿಸ್ಟಮ್‌ಗಿಂತ ವಿಭಿನ್ನವಾದುದು. ಇದಕ್ಕಾಗಿ ಬ್ಯಾಚುಲರ್‌ ಆಫ್‌ ಸೈನ್ಸ್‌ ಕೋರ್ಸ್‌ನ್ನು ಹಲವು ಶಿಕ್ಷಣ ಸಂಸ್ಥೆಗಳು ಆಫರ್‌ ಮಾಡುತ್ತಿವೆ.

ಬಿಎಸ್‌ ಇನ್‌ ಇನ್‌ಫಾರ್ಮೇಶನ್‌ ಟೆಕ್ನಾಲಜಿ ಮ್ಯಾನೇಜ್ಮೆಂಟ್‌ ಪ್ರೋಗ್ರಾಂನಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ವ್ಯವಸ್ಥೆಯ ಕುರಿತು ತಿಳಿವಳಿಕೆ, ವಿಶ್ಲೇಷಣೆ ವಿಧಾನವನ್ನು ಹೇಳಿ ಕೊಡಲಾಗುತ್ತದೆ. ಜೊತೆಗೆ ಹಾರ್ಡ್‌ವೇರ್‌ ಮತ್ತು ನೆಟ್‌ವರ್ಕಿಂಗ್‌ ಕೂಡ ತಿಳಿಸಿ ಕೊಡಲಾಗುತ್ತದೆ. ಪ್ರೋಗ್ರಾಮಿಂಗ್‌ ಲ್ಯಾಂಗ್ವೇಜ್‌ಗಳಾದ ಜಾವಾ ಮತ್ತು ವಿಶುವಲ್‌ ಬೇಸಿಕ್‌ನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಇದರಲ್ಲಿ ಹಲವು ಕೋರ್ಸ್‌ಗಳಿದ್ದು, ಅವುಗಳ ಪೈಕಿ ಪ್ರಮುಖವಾದವುಗಳು ಎಂದರೆ, ಬ್ಯುಸಿನೆಸ್‌ ಕಮ್ಯುನಿಕೇಶನ್‌, ಡೇಟಾಬೇಸ್‌ ಮ್ಯಾನೇಜ್ಮೆಂಟ್‌, ಸಾಫ್ಟ್‌ವೇರ್‌ ಕಾನ್ಸೆಪ್ಟ್‌, ಅಪರೇಶನ್ಸ್‌ ಮ್ಯಾನೇಜ್ಮೆಂಟ್‌, ಡೆಸ್ಕ್‌ಟಾಪ್‌ ಅಪ್ಲಿಕೇಶನ್‌ ಸಪೋರ್ಟ್‌, ಪಾಪ್ಯುಲರ್‌ ಕರಿಯರ್‌ ಆಫ್ಶನ್ಸ್‌ ಮೊದಲಾದವುಗಳು.

ಉದ್ಯೋಗಾವಕಾಶ

ಬಿಎಸ್‌ ಇನ್‌ ಇನ್‌ಫಾರ್ಮೇಶನ್‌ ಟೆಕ್ನಾಲಜಿ ಮ್ಯಾನೇಜ್ಮೆಂಟ್‌ ಡಿಗ್ರಿಯನ್ನು ಯಶಸ್ವಿಯಾಗಿ ಪೂರೈಸಿದವರು ಸ್ವಂತ ಉದ್ಯಮ ಮಾಡಬಹುದು. ಇದಲ್ಲದೆ ಶಿಕ್ಷಣ ಸಂಸ್ಥೆಗಳು, ಸರಕಾರಿ ಕ್ಷೇತ್ರದಲ್ಲೂ ಉದ್ಯೋಗ ಪಡೆಯಬಹುದು. ಕನ್‌ಸಲ್ಟೆಂಟ್‌ಗಳಾಗಿ ಸ್ವಂತ ಸಂಸ್ಥೆ ಸ್ಥಾಪಿಸಬಹುದು. ಇದನ್ನು ಹೊರತು ಪಡಿಸಿ, ಅಪ್ಲಿಕೇಶನ್‌ ಡೆವಲಪರ್‌, ಕಂಪ್ಯೂಟರ್‌ ಸ್ಪೆಶಲಿಸ್ಟ್‌, ಡೇಟಾ ಕಮ್ಯುನಿಕೇಶನ್‌ ಅನಲೈಸಿಸ್ಟ್‌, ಡೇಟಾಬೇಸ್‌ ಅಡ್ಮಿನಿಸ್ಪ್ರೇಟರ್‌, ಕಮ್ಯುನಿಕೇಶನ್‌ ಅನಲೈಸಿಸ್ಟ್‌ ಆಗಿ ಉದ್ಯೋಗ ಪಡೆಯಲು ಸಾಧ್ಯವಿದೆ.

ಅಮೆರಿಕದ ಲೇಬರ್‌ ಸ್ಟಾಟಿಸ್ಟಿಕ್ಸ್‌ ಬ್ಯೂರೋ (ಬಿಎಲ್‌ಎಸ್‌) ವರದಿ ಪ್ರಕಾರ, 2014-24ರ ಅವಧಿಯಲ್ಲಿ ಶೇ. 19ರಷ್ಟು ಅಪ್ಲಿಕೇಶನ್‌ ಡೆವಲಪರ್‌ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಳವಾಗಲಿದೆ. 2015ರ ಅಂಕಿ ಅಂಶಗಳ ಪ್ರಕಾರ ಸರಾಸರಿ ಮಾಸಿಕ 1.25 ಲಕ್ಷ ರೂ. ವೇತನವನ್ನು ಉದ್ಯೋಗಿಗಳು ಪಡೆಯುತ್ತಿದ್ದಾರೆ. ಕಂಪ್ಯೂಟರ್‌ ಸಪೋರ್ಟ್‌ ಸ್ಪೆಶಲಿಸ್ಟ್‌ಗಳ ಉದ್ಯೋಗಾವಕಾಶ 2024ರೊಳಗೆ ಶೇ. 12ರಷ್ಟು ಹೆಚ್ಚಳವಾಗಲಿದೆ. ಇವರು ವಾರ್ಷಿಕ 62,250 ಡಾಲರ್‌ ವೇತನ ಪಡೆಯುತ್ತಿದ್ದಾರೆ.

ಪದವಿ ಪೂರೈಸಿದ ಬಳಿಕ ಉನ್ನತ ಸಿಕ್ಷಣ ಪಡೆಯಲು ಅವಕಾಶವಿದೆ. ಮಾಸ್ಟರ್‌ ಆಫ್‌ ಸೈನ್ಸ್‌ ಇನ್‌ ಇನ್‌ಫಾರ್ಮೇಶನ್‌ ಟೆಕ್ನಾಲಜಿ ಮ್ಯಾನೇಜ್ಮೆಂಟ್‌ ಕೋರ್ಸ್‌ನ್ನು ಮಾಡಬಹುದಾಗಿದೆ. ಒಂದು ವೇಳೆ ಉದ್ಯಮದತ್ತ ಹೆಚ್ಚಿನ ಆಸಕ್ತಿಯಿದ್ದರೆ, ಆಗ ಮಾಹಿತಿ ತಂತ್ರಜ್ಞಾನದತ್ತ ಹೆಚ್ಚು ಒತ್ತು ನೀಡುವ ಮಾಸ್ಟರ್‌ ಆಫ್‌ ಬ್ಯುಸಿನೆಸ್‌ ಅಡ್ಮಿನಿಸ್ಪ್ರೇಷನ್‌ ಕೋರ್ಸ್‌ ಮಾಡಬಹುದು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರ ಹುದ್ದೆ, ಸಂಶೋಧಕರ ಹುದ್ದೆಯತ್ತ ಹೆಚ್ಚು ಆಸಕ್ತಿ ಹೊಂದಿದ್ದರೆ, ಅಂತಹವರಿಗೆ ಡಾಕ್ಟೋರಲ್‌ ಡಿಗ್ರಿ ಇನ್‌ ಇನ್‌ಫಾರ್ಮೇಶನ್‌ ಟೆಕ್ನಾಲಜಿ ಮ್ಯಾನೇಜ್ಮೆಂಟ್‌ ಲಭ್ಯವಿದೆ. ಒಟ್ಟಿನಲ್ಲಿ ಬಿಎಸ್‌ ಇನ್‌ ಇನ್‌ಫಾರ್ಮೇಶನ್‌ ಟೆಕ್ನಾಲಜಿ ಮ್ಯಾನೇಜ್ಮೆಂಟ್‌ ಉನ್ನತ ಇಂಟರ್‌ಡಿಸಿಪ್ಲಿನರಿ ಶಿಕ್ಷಣವಾಗಿದ್ದು, ಉದ್ಯಮ ಮತ್ತು ತಂತ್ರಜ್ಞಾನ ಎರಡರಲ್ಲೂ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ, ದೊಡ್ಡ ಪ್ರಮಾಣದ ಉದ್ಯೋಗಾವಕಾಶ ಒದಗಿಸುತ್ತದೆ.